ಪ್ರತಿ ಮನೆಯಲ್ಲೂ ಗೃಹ ಜ್ಯೋತಿ ಬೆಳಗುತ್ತಿದೆ

ಪ್ರತಿ ಮನೆಯನ್ನು ಬೆಳಗುತ್ತಿರುವ ಗೃಹಜ್ಯೋತಿಪ್ರತಿ ಮನೆಯನ್ನು ಬೆಳಗುತ್ತಿರುವ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ೬೧೨೬೪೫ ಗ್ರಾಹಕರು ನೋಂದಾಯಿಸಿಕೊAಡಿದ್ದು, ಇದರಿಂದ ಜಿಲ್ಲೆಯಲ್ಲಿ ಈವರೆಗೆ ಯೋಜನೆಗೆ ಶೇ.೭೯.೪೪ರಷ್ಟು ನೋಂದಣಿಯಾದAತಾಗಿದೆ.ಮೂಲಭೂತ ಸೌಕರ್ಯಗಳಲ್ಲೊಂದಾದ ವಿದ್ಯುಚ್ಛಕ್ತಿ ಸೌಲಭ್ಯವನ್ನು ಅರ್ಹ ನಾಗರಿಕರಿಗೆ ಉಚಿತವಾಗಿ ನೀಡುವ ದೃಷ್ಟಿಯಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜೂನ್ ೧೮ರಿಂದ ಗ್ರಾಹಕರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲಿಚ್ಛಿಸುವ ಫಲಾನುಭವಿಗಳು ವಿಶೇಷವಾಗಿ ಸೃಜಿಸಲಾಗಿರುವ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿ ಮನೆಗೆ ಮಾಹೆಯಾನ […]