ಪ್ರತಿ ಮನೆಯಲ್ಲೂ ಗೃಹ ಜ್ಯೋತಿ ಬೆಳಗುತ್ತಿದೆ

0 minutes, 3 seconds Read

ಪ್ರತಿ ಮನೆಯನ್ನು ಬೆಳಗುತ್ತಿರುವ ಗೃಹಜ್ಯೋತಿ
ಪ್ರತಿ ಮನೆಯನ್ನು ಬೆಳಗುತ್ತಿರುವ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಗೆ ೬೧೨೬೪೫ ಗ್ರಾಹಕರು ನೋಂದಾಯಿಸಿಕೊAಡಿದ್ದು, ಇದರಿಂದ ಜಿಲ್ಲೆಯಲ್ಲಿ ಈವರೆಗೆ ಯೋಜನೆಗೆ ಶೇ.೭೯.೪೪ರಷ್ಟು ನೋಂದಣಿಯಾದAತಾಗಿದೆ.
ಮೂಲಭೂತ ಸೌಕರ್ಯಗಳಲ್ಲೊಂದಾದ ವಿದ್ಯುಚ್ಛಕ್ತಿ ಸೌಲಭ್ಯವನ್ನು ಅರ್ಹ ನಾಗರಿಕರಿಗೆ ಉಚಿತವಾಗಿ ನೀಡುವ ದೃಷ್ಟಿಯಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜೂನ್ ೧೮ರಿಂದ ಗ್ರಾಹಕರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲಿಚ್ಛಿಸುವ ಫಲಾನುಭವಿಗಳು ವಿಶೇಷವಾಗಿ ಸೃಜಿಸಲಾಗಿರುವ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಗ್ರಾಹಕರಿಗೆ ಪ್ರತಿ ಮನೆಗೆ ಮಾಹೆಯಾನ ಗರಿಷ್ಠ ೨೦೦ ಯೂನಿಟ್‌ಗಳವರೆಗೆ ವಿದ್ಯುತ್ ಬಳಕೆ ಮಾಡಲು ಮಿತಿ ನಿಗಧಿಗೊಳಿಸಲಾಗಿದೆ. ವಿದ್ಯುತ್ ಬಳಕೆ ಮಿತಿಯಲ್ಲಿ ಗ್ರಾಹಕರ ಮಾಸಿಕ ಸರಾಸರಿ ವಿದ್ಯುತ್ ಬಳಕೆಯ (ಆರ್ಥಿಕ ವರ್ಷ ೨೦೨೨-೨೩ ಆಧಾರದನ್ವಯ) ಯೂನಿಟ್‌ಗಳ ಮೇಲೆ ಶೇ ೧೦ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅರ್ಹರಿರುತ್ತಾರೆ. ಯೋಜನೆಯಡಿ ನೋಂದಾಯಿಸಿಕೊAಡವರಿಗೆ ಆಗಸ್ಟ್ ೧ ರಿಂದ ಶೂನ್ಯ ಬಿಲ್ಲನ್ನು ವಿತರಿಸಲಾಗುತ್ತಿದೆ.
ಭಾಗ್ಯಜ್ಯೋತಿ/ ಕುಟೀರ ಜ್ಯೋತಿ ಹಾಗೂ ಅಮೃತಜ್ಯೋತಿ ಫಲಾನುಭವಿಗಳು ಸಹ ಯೋಜನೆ ವ್ಯಾಪ್ತಿಗೊಳಪಡುತ್ತಾರೆ.
ಜಿಲ್ಲೆಯಲ್ಲಿ ಒಟ್ಟು ೭೮೧೭೫೩ ಗೃಹಬಳಕೆ ಸ್ಥಾವರ(ವಿದ್ಯುತ್ ಮಾಪಕ)ಗಳಿದ್ದು, ೭೭೧೧೬೮ ಗ್ರಾಹಕರು ೨೦೦ ಯೂನಿಟ್‌ಗಳಿಗಿಂತ ಕಡಿಮೆ ಹಾಗೂ ೧೦೫೮೫ ಗ್ರಾಹಕರು ೨೦೦ ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆಗೆ ಜೂನ್ ಮಾಹೆಯಲ್ಲಿ ೭೭೫೪೪, ಜುಲೈ ಮಾಹೆಯಲ್ಲಿ ೭೦೮೯೪ ಹಾಗೂ ಆಗಸ್ಟ್ ಮಾಹೆಯಲ್ಲಿ ಈವರೆಗೂ ೭೪೯೦ ಸೇರಿ ಒಟ್ಟು ೬೧೨೬೪೫ ಗ್ರಾಹಕರು ನೋಂದಾಯಿಸಿಕೊAಡಿದ್ದು, ೧೫೮೫೨೩ ಗ್ರಾಹಕರು ನೋಂದಣಿಯಾಗಬೇಕಿದೆ.
ನೋAದಣಿಗೆ ಬಾಕಿಯಿರುವ ಗ್ರಾಹಕರು ಕೂಡಲೇ ತಮ್ಮ ಆಧಾರ್ ಕಾರ್ಡ್, ಗ್ರಾಹಕರ ಐ.ಡಿ.(ವಿದ್ಯುತ್ ಬಿಲ್ಲಿನಲ್ಲಿರುವಂತೆ) ಮಾಹಿತಿಯನ್ನು ಗ್ರಾಮ-ಒನ್, ಕರ್ನಾಟಕ-ಒನ್, ವಿದ್ಯುತ್ ಕಂಪನಿಗಳ ಗೃಹಜ್ಯೋತಿ ನೋಂದಣಿ ಕೌಂಟರ್‌ಗಳಲ್ಲಿ ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿ ಪ್ರಕ್ರಿಯೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಆಯಾ ವಿದ್ಯುತ್ ಕಚೇರಿ ಅಥವಾ ೨೪ x ೭ ಸಹಾಯವಾಣಿ ೧೯೧೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಅಲ್ಲದೆ ಗೃಹಜ್ಯೋತಿಯ ಶೂನ್ಯ ಬಿಲ್ಲಿಂಗ್‌ಗೆ ಸಂಬAಧಪಟ್ಟAತೆ ನ್ಯೂನ್ಯತೆಗಳಿದ್ದಲ್ಲಿ ಸರಿಪಡಿಸಲು ಹಾಗೂ ಗ್ರಾಹಕರಿಗೆ ತಿಳುವಳಿಕೆ ನೀಡಲು ಬೆಸ್ಕಾಂ ಕಚೇರಿಯಿಂದ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನೋಡಲ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯಾ ಶಾಖೆಯ ಶಾಖಾಧಿಕಾರಿಗಳು/ಸಹಾಯಕ ಲೆಕ್ಕಾಧಿಕಾರಿಗಳು/ಹಿರಿಯ ಸಹಾಯಕರುಗಳಿಗೆ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ.

Leave a Reply

Your email address will not be published. Required fields are marked *